ರಾಗಿ ತಂದೀರಾ ಭಿಕ್ಷಕೆ | Ragi tandeera

Jazz

June 12th, 2024suno

Lyrics

[intro] [chorus] ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ [Instrumental] [verse] ಅನ್ನದಾನವ ಮಾಡುವರಾಗಿ ಅನ್ನ ಛತ್ರವನ್ನಿಟ್ಟವರಾಗಿ ಅನ್ಯ ವಾರ್ತೆಯ ಬಿಟ್ಟವರಾಗಿ ಅನುದಿನ ಭಜನೆಯ ಮಾಡುವರಾಗಿ ಮಾತಾಪಿತೃಗಳ ಸೇವಿಪರಾಗಿ ಪಾಪ ಕಾರ್ಯದ ಬಿಟ್ಟವರಾಗಿ ಜಾತಿಯಲಿ ಮಿಗಿಲಾದವರಾಗಿ ನೀತಿ ಮಾರ್ಗದಲಿ ಖ್ಯಾತರಾಗಿ [chorus] ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ [Instrumental] [verse] ಗುರು ಕಾರುಣ್ಯವ ಪಡೆದವರಾಗಿ ಗುರುವಿನ ಮರ್ಮವ ತಿಳಿದವರಾಗಿ ಗುರುವಿನ ಪಾದವ ಸ್ಮರಿಸುವರಾಗಿ ಪರಮ ಪುಣ್ಯವ ಮಾಡುವರಾಗಿ ಶ್ರೀನಿವಾಸನ ಸ್ಮರಿಸುವರಾಗಿ ಪ್ರಾಣರಾಯನ ದಾಸರಾಗಿ ದಾನಕೆಂದು ಬಲು ಹೆದರಿ ಇಂಥ ದೀನವೃತ್ತಿಯಲಿ ಹೀನರಾಗಿ [chorus] ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ [Instrumental] [verse] ಪಕ್ಷಮಾಸ ವ್ರತ ಮಾಡುವರಾಗಿ ಪಕ್ಷಿವಾಹನಗೆ ಪ್ರಿಯರಾಗಿ ಕುಕ್ಷಿಲಿ ಕಲ್ಮಷ ಇಲ್ಲದವರಾಗಿ ಭಿಕ್ಷುಕರು ಅತಿ ತುಚ್ಛರಾಗಿ ವೇದ ಪುರಾಣವ ತಿಳಿದವರಾಗಿ ಮೇದಿನಿಯಾಳುವಂಥವರಾಗಿ ಸಾಧು ಧರ್ಮವಾಚರಿಸುವರಾಗಿ ಓದಿ ಗ್ರಂಥಗಳ ಪಂಡಿತರಾಗಿ [chorus] ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ [Instrumental] [verse] ಆರು ಮಾರ್ಗವ ಅರಿತವರಾಗಿ ಮೂರು ಮಾರ್ಗವ ತಿಳಿದವರಾಗಿ ಭೂರಿ ತತ್ತ್ವವ ಬೆರೆದವರಾಗಿ ಕ್ರೂರರ ಸಂಗವ ಬಿಟ್ಟವರಾಗಿ ಕಾಮ ಕ್ರೋಧವ ಅಳಿದವರಾಗಿ ನೇಮ ನಿಷ್ಠೆಗಳ ಮಾಡುವರಾಗಿ ಆ ಮಹಾಪದವಿಲಿ ಸುಖಿಸುವರಾಗಿ ಪ್ರೇಮದಿ ಕುಣಿ ಕುಣಿದಾಡುವರಾಗಿ [chorus] ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ [Instrumental] [verse] ಸಿರಿ ರಮಣನ ಸದಾ ಸ್ಮರಿಸುವರಾಗಿ ಗುರುತಿಗೆ ಬಾಹೋರಂಥವರಾಗಿ ಕರೆಕರೆ ಸಂಸಾರ ನೀಗುವರಾಗಿ ಪುರಂದರವಿಠಲನ ಸೇವಿಪರಾಗಿ ಸಿರಿ ರಮಣನ ಸದಾ ಸ್ಮರಿಸುವರಾಗಿ ಗುರುತಿಗೆ ಬಾಹೋರಂಥವರಾಗಿ ಕರೆಕರೆ ಸಂಸಾರ ನೀಗುವರಾಗಿ ಪುರಂದರವಿಠಲನ ಸೇವಿಪರಾಗಿ [chorus] ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ [Instrumental] [outro]

Empfohlen

Truckerský Život
Truckerský Život

rock energický elektrický

La canzone della legalità
La canzone della legalità

90' hip-hop, rap, melodic, pop, hip hop, upbeat, female

Show me the way
Show me the way

psychedelic rock electric, chillout, soulful, emotional, slow, rifts, upbeat, emotional female

Wandering Heart
Wandering Heart

Folk, relaxed feel, cajón drum, R&B male vocal, natural ambient, metal drum, marimba, tribal africa,

Into the Light
Into the Light

electronic energetic pop

소년만화의 꿈
소년만화의 꿈

uplifting rock

The Hero
The Hero

melodic piano choir

Wake Up and Smile
Wake Up and Smile

lively children's hindi

Island Bounce
Island Bounce

dubstep reggae rap

Lion's Hunt
Lion's Hunt

action chase instrumental synth

Dansaðu Með Mér
Dansaðu Með Mér

2000s eurodance, high-energy with a pulsing beat and electronic textures. female vocals with layered harmonies in the chorus., pop, eurodance, synth-driven

Twins Connection
Twins Connection

alternative rock, cinematic, rock, dynamic, fast vocal, female vocal, fast, metal, hard rock, heavy metal, epiс, anime

Docking Procedures
Docking Procedures

ambient minimal synth melancholic