
ನಗುತ್ತ ಕಳೆಯೋಣ.
male vocal, rap, beat, bass, hip-hop
July 31st, 2024suno
가사
[intro]
[instrumental]
ವಯಸ್ಸಾಯ್ತು…. ವಯಸ್ಸಾಯ್ತು….
ಎಲ್ಲ ಗೆಳೆಯರಿಗೂ ವಯಸ್ಸಾಯ್ತು
ನಿಧಾನಕ್ಕೆ ನಡೆಯುತ್ತಿದ್ದಾರೆ
ನನ್ನ ಹಾಗೇ…
ಹರೆಯದಲ್ಲಿ ಮಿಂಚುತ್ತಿದ್ದ
ಪಟ್ಟುಗಳೆಲ್ಲ ಈಗ
ಮಾಯವಾಯ್ತು
ಕೆಲವರಿಗೆ ಹೊಟ್ಟೆ ಬಂದಿದೆ
ಇನ್ಯಾರಿಗೋ
ತಲೆ ಬೊಳಾಗಿದೆ.
ವಯಸ್ಸಾಯ್ತು…. ವಯಸ್ಸಾಯ್ತು….
ಗೆಳೆಯರೇ ವಯಸ್ಸಾಯ್ತು
ಯಾರಿಗೋ ದೇಹದ ನೋವು
ಯಾರಿಗೋ ಮನದ ಅಳಲು
ದಿನವಿಡೀ ಓಡುತ್ತಿದ್ದವ
ಈಗ ನಡೆಯಲು
ದಣಿವಾರಿಸಿಕೊಳ್ಳುತ್ತಿದ್ದಾರೆ.
ಯಾರಿಗೂ ಸಮಯವಿಲ್ಲ
ಎಲ್ಲರ ಕಣ್ಣಲ್ಲೂ ನೋವಿನ
ಛಾಯೆ ಛಾಯೆ…
ವಯಸ್ಸಾಯ್ತು…. ವಯಸ್ಸಾಯ್ತು….
ಗೆಳೆಯರೇ ವಯಸ್ಸಾಯ್ತು
ಎಲ್ಲರಿಗೂ ಅನ್ನಿಸುವುದು
ಅಪ್ಪನನ್ನು ಇನ್ನಷ್ಟು
ಆರೈಕೆ ಮಾಡಬೇಕಿತ್ತು.!!
ಕೊನೆಯ ದಿನಗಳಲ್ಲಿ
ಅಮ್ಮನ ಸೇವೆ ಮಾಡಬೇಕಿತ್ತು.!!
ಕೆಲವರಿಗೆ ಪಶ್ಚಾತ್ತಾಪ..
ಹೆಂಡತಿಯನ್ನ
ಇನ್ನೂ ಪ್ರೀತಿಸಬೇಕಿತ್ತು..
ಅವಳೊಂದಿಗೆ ಹೆಚ್ಚು
ಸಮಯ ಕಳೆಯಬೇಕಿತ್ತು ?
ಮಕ್ಕಳಿಗೆ..
ಸಮಯ ಕೊಡಬೇಕಿತ್ತು
ಮಿತ್ರನೊಂದಿಗೆ ..
ಜಗಳ ಮಾಡಬಾರದಿತ್ತು
ಎಂಬ ಏನೇನೋ
ಹಳೇ ನೆನಪು ಕಾಡುತ್ತವೆ.!?.
ವಯಸ್ಸಾಯ್ತು…. ವಯಸ್ಸಾಯ್ತು….
ಗೆಳೆಯರೇ ವಯಸ್ಸಾಯ್ತು
ಅಂತೂ ಇಷ್ಟಾದರೂ ಸಾಧಿಸಿದೆನಲ್ಲ
ಎಂಬ ನೆಮ್ಮದಿಯೂ ಇದೆ ..!!!
ಹಳೆಯ ಭಾವಚಿತ್ರಗಳ
ನೋಡಿ , ನೋಡಿ, ನೋಡಿ..
ಈಗಲೂ …ಮನಸ್ಸು ತುಂಬಿ ಬರುತ್ತದೆ .
ಸಮಯ
ಎಂಥ ವಿಚಿತ್ರ
ಹೇಗೆ ಸವೆದು ಹೋಯ್ತು
ನಿನ್ನೆಯ
ನವ ಯುವಕ
ನನ್ನ ಗೆಳೆಯ
ಇಂದು ವೃದ್ಧ
ಒಂದೊಮ್ಮೆ ಕನಸು
ಕಾಣುತ್ತಿದ್ದವ
ಗತಿಸಿದ ದಿನಗಳಲಿ
ಕಳೆದು ಹೋಗುತ್ತಾ ಇದ್ದಾರೆ..
ಆದರೆ
ಇದು ಪರಮ ಸತ್ಯ
ಎಲ್ಲಾ ಗೆಳೆಯರೂ
ನೋಡ ನೋಡುತ್ತಲೇ
ಹಣ್ಣಾಗುತ್ತಿದ್ದಾರೆ.!
ಕೆಲವ್ರು ಹಣ್ ಹಣ್
ಕೂಡ ಆಗ್ತಾ ಇದ್ದಾರೆ..!!!
ಅದಕ್ಕೆ ಹೆಳೋದು…
ಮಾಡುವುದನ್ನು
ಮಾಡಿ ಮುಗಿಸಿ
ಕೊಡುವುದನ್ನು
ಕೊಟ್ಟು ಮುಗಿಸಿ
ಮನಸಿನ ಆಸೆಗಳನ್ನು
ಬಚ್ಚಿಟ್ಟು ಕೊರಗದಿರಿ
ನಿರಾಳ ಮನಸ್ಸಿನಿಂದ ಬದುಕಿರಿ.!!
ಗೆಳೆಯ……
ನೀನು ಒಂದು
ಕೊಹಿನೂರ್ ವಜ್ರ!!!
ಮರೆಯೋಣ
ಕಳೆಯೋಣ
ಹಳೆಯ ಮಿತ್ರರೊಂದಿಗೆ
ಬದುಕಿನ ಕೊನೆಯ ಕ್ಷಣಗಳ
ಸದಾ ನಗು
ನಗುತ್ತ ಕಳೆಯೋಣ.
[end]
추천

sad issi
sad, emo, depressed, rap, quick

Get Well Soon
piano heartfelt melodic

Let go
pop

Deniz Aşkı METAL
Metal Rock, vocals, heavy riff

Driving Down
Rock, Alternative, americana, Male Voice, catchy

Magic Worlds
electronic pop

Matla a Talento Navždy
country melodické akustické

Демониада
Groovy emotional Rock (sum41)

花火の祭り
traditional japanese instruments funk

Social Saboteur
aggressive epic metal heavy

New Life for Me
rhythmic smooth pop

Shadows Over Verdant
heavy metal rock opera

ramdon
smooth drum and bass

Bossa Nova Vibes
smooth rhythmic jazzy

Ambient sonata moonlight.
experements songs, sonata moonlight, Ambient, Classical, metal darkness,

Бьётся сердце
alternative rock, metal, energetic, smooth

Bobby
bass


