ರಾಯರು ಬಂದರು ಮಾವನ ಮನೆಗೆ | My husband came to my father's home

Playful emotions, expressive, improvisational. Indian, j-pop, ballad, smooth

July 1st, 2024suno

Lyrics

[intro] [chrous 2x] ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು ....ತುಂಬಿದ ಚಂದಿರ ಬಂದಿತ್ತು [verse] ಮಾವನ ಮನೆಯಲಿ ಮಲ್ಲಿಗೆ ಹೂಗಳ ಪರಿಮಳ ತುಂಬಿತ್ತು ಬಾಗಿಲ ಬಳಿ ಕಾಲಿಗೆ ಬಿಸಿನೀರಿನ ತಂಬಿಗೆ ಬಂದಿತ್ತು ... ಒಳಗಡೆ ದೀಪದ ಬೆಳಕಿತ್ತು ಘಮಘಮಿಸುವ ಮೃಷ್ಟಾನ್ನದ ಭೋಜನ ರಾಯರ ಕಾದಿತ್ತು ಬೆಳ್ಳಿಯ ಬಟ್ಟಲ ಗಸಗಸೆಪಾಯಸ ರಾಯರ ಕರೆದಿತ್ತು ....ಭೂಮಿಗೆ ಸ್ವರ್ಗವೆ ಇಳಿದಿತ್ತು [instrumental] [chrous] ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು ....ತುಂಬಿದ ಚಂದಿರ ಬಂದಿತ್ತು [verse] ಚಪ್ಪರಗಾಲಿನ ಮಂಚದ ಮೇಗಡೆ ಮೆತ್ತನ ಹಾಸಿತ್ತು ಅಪ್ಪಟ ರೇಶಿಮೆ ದಿಂಬಿನ ಅಂಚಿಗೆ ಚಿತ್ರದ ಹೂವಿತ್ತು ... ಪದುಮಳು ಹಾಕಿದ ಹೂವಿತ್ತು ಚಿಗುರೆಲೆ ಬಣ್ಣದ ಅಡಿಕೆಯ ತಂದಳು ನಾದಿನಿ ನಗುನಗುತಾ ಬಿಸಿಬಿಸಿ ಹಾಲಿನ ಬಟ್ಟಲು ತಂದರು ಅಕ್ಕರೆಯಲಿ ಮಾವ .... ಮಡದಿಯ ಸದ್ದೇ ಇರಲಿಲ್ಲ [instrumental] [chrous] ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು ....ತುಂಬಿದ ಚಂದಿರ ಬಂದಿತ್ತು [verse] ಮಡದಿಯ ತಂಗಿಯ ಕರೆದಿಂತೆಂದರು ಅಕ್ಕನ ಕರೆಯಮ್ಮಾ ಮೆಲುದನಿಯಲಿ ನಾದಿನ ಇಂತೆಂದಳು ಪದುಮಳು ಒಳಗಿಲ್ಲ ... ಪದುಮಳ ಬಳೆಗಳ ದನಿಯಿಲ್ಲ ಬೆಳಗಾಯಿತು ಸರಿ ಹೊರಡುವೆನೆಂದರು ರಾಯರು ಮುನಿಸಿನಲಿ ಒಳಮನೆಯಲಿ ನೀರಾಯಿತು ಎಂದಳು ನಾದಿನಿ ರಾಗಲಿ ... ಯಾರಿಗೆ ಎನ್ನಲು ಹರುಷದಲಿ [instrumental] [chrous] ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು ....ತುಂಬಿದ ಚಂದಿರ ಬಂದಿತ್ತು [outro] ಪದುಮಳು ಬಂದಳು.. ಪದುಮಳು ಬಂದಳು.. ಪದುಮಳು ಬಂದಳು.. .... ಹೂವನು ಮುಡಿಯುತ ರಾಯರ ಕೋಣೆಯಲಿ ರಾಯರ ಕೋಣೆಯಲಿ. ರಾಯರ ಕೋಣೆಯಲಿ. [end]

Recommended

Recordação
Recordação

Soft metalcore

La Vita di Un Gatto
La Vita di Un Gatto

alternative rock cyberpunk

Take Me Away
Take Me Away

Heavy Metal Electronic Alternative

Brighter Days Ahead
Brighter Days Ahead

uplifting pop

יאללה!
יאללה!

שיר ילדים, children song, babies' song, שיר לפעוטות

İlgisiz Günler
İlgisiz Günler

melancholic soulful lo-fi

Queen of Mondos
Queen of Mondos

surf rock,surf music,rock,playful,energetic,uplifting,rhythmic

el amor del Agua y Fuego
el amor del Agua y Fuego

pop romántico, tecno, reggaeton

Классно летать
Классно летать

trance, ambient, house, pop, electro, beats

hard hit
hard hit

techno electro dark trance

Neon Night
Neon Night

electronic house 125 bpm minimal 90s

Here's to you babe
Here's to you babe

country blues, acoustic, warm heartfelt, catchy

Always There
Always There

laid-back uplifting reggae, heartfelt, pop, synth

Voz del Corazon
Voz del Corazon

instrumental,instrumental,garage rock revival,energetic,raw,acoustic rock,mexican,emotional

The Lonely Knight
The Lonely Knight

rock, pop, edm DJ

Hüzünlenmek
Hüzünlenmek

damar emotional heartfelt

Makan Yuk
Makan Yuk

children's playful