ನಗುತ್ತ ಕಳೆಯೋಣ.

male vocal, rap, beat, bass, hip-hop

July 31st, 2024suno

Lyrics

[intro] [instrumental] ವಯಸ್ಸಾಯ್ತು…. ವಯಸ್ಸಾಯ್ತು…. ಎಲ್ಲ ಗೆಳೆಯರಿಗೂ ವಯಸ್ಸಾಯ್ತು ನಿಧಾನಕ್ಕೆ ನಡೆಯುತ್ತಿದ್ದಾರೆ ನನ್ನ ಹಾಗೇ… ಹರೆಯದಲ್ಲಿ ಮಿಂಚುತ್ತಿದ್ದ ಪಟ್ಟುಗಳೆಲ್ಲ ಈಗ ಮಾಯವಾಯ್ತು ಕೆಲವರಿಗೆ ಹೊಟ್ಟೆ ಬಂದಿದೆ ಇನ್ಯಾರಿಗೋ ತಲೆ ಬೊಳಾಗಿದೆ. ವಯಸ್ಸಾಯ್ತು…. ವಯಸ್ಸಾಯ್ತು…. ಗೆಳೆಯರೇ ವಯಸ್ಸಾಯ್ತು ಯಾರಿಗೋ ದೇಹದ ನೋವು ಯಾರಿಗೋ ಮನದ ಅಳಲು ದಿನವಿಡೀ ಓಡುತ್ತಿದ್ದವ ಈಗ ನಡೆಯಲು ದಣಿವಾರಿಸಿಕೊಳ್ಳುತ್ತಿದ್ದಾರೆ. ಯಾರಿಗೂ ಸಮಯವಿಲ್ಲ ಎಲ್ಲರ ಕಣ್ಣಲ್ಲೂ ನೋವಿನ ಛಾಯೆ ಛಾಯೆ… ವಯಸ್ಸಾಯ್ತು…. ವಯಸ್ಸಾಯ್ತು…. ಗೆಳೆಯರೇ ವಯಸ್ಸಾಯ್ತು ಎಲ್ಲರಿಗೂ ಅನ್ನಿಸುವುದು ಅಪ್ಪನನ್ನು ಇನ್ನಷ್ಟು ಆರೈಕೆ ಮಾಡಬೇಕಿತ್ತು.!! ಕೊನೆಯ ದಿನಗಳಲ್ಲಿ ಅಮ್ಮನ ಸೇವೆ ಮಾಡಬೇಕಿತ್ತು.!! ಕೆಲವರಿಗೆ ಪಶ್ಚಾತ್ತಾಪ.. ಹೆಂಡತಿಯನ್ನ ಇನ್ನೂ ಪ್ರೀತಿಸಬೇಕಿತ್ತು.. ಅವಳೊಂದಿಗೆ ಹೆಚ್ಚು ಸಮಯ ಕಳೆಯಬೇಕಿತ್ತು ? ಮಕ್ಕಳಿಗೆ.. ಸಮಯ ಕೊಡಬೇಕಿತ್ತು ಮಿತ್ರನೊಂದಿಗೆ .. ಜಗಳ ಮಾಡಬಾರದಿತ್ತು ಎಂಬ ಏನೇನೋ ಹಳೇ ನೆನಪು ಕಾಡುತ್ತವೆ.!?. ವಯಸ್ಸಾಯ್ತು…. ವಯಸ್ಸಾಯ್ತು…. ಗೆಳೆಯರೇ ವಯಸ್ಸಾಯ್ತು ಅಂತೂ ಇಷ್ಟಾದರೂ ಸಾಧಿಸಿದೆನಲ್ಲ ಎಂಬ ನೆಮ್ಮದಿಯೂ ಇದೆ ..!!! ಹಳೆಯ ಭಾವಚಿತ್ರಗಳ ನೋಡಿ , ನೋಡಿ, ನೋಡಿ.. ಈಗಲೂ …ಮನಸ್ಸು ತುಂಬಿ ಬರುತ್ತದೆ . ಸಮಯ ಎಂಥ ವಿಚಿತ್ರ ಹೇಗೆ ಸವೆದು ಹೋಯ್ತು ನಿನ್ನೆಯ ನವ ಯುವಕ ನನ್ನ ಗೆಳೆಯ ಇಂದು ವೃದ್ಧ ಒಂದೊಮ್ಮೆ ಕನಸು ಕಾಣುತ್ತಿದ್ದವ ಗತಿಸಿದ ದಿನಗಳಲಿ ಕಳೆದು ಹೋಗುತ್ತಾ ಇದ್ದಾರೆ.. ಆದರೆ ಇದು ಪರಮ ಸತ್ಯ ಎಲ್ಲಾ ಗೆಳೆಯರೂ ನೋಡ ನೋಡುತ್ತಲೇ ಹಣ್ಣಾಗುತ್ತಿದ್ದಾರೆ.! ಕೆಲವ್ರು ಹಣ್ ಹಣ್ ಕೂಡ ಆಗ್ತಾ ಇದ್ದಾರೆ..!!! ಅದಕ್ಕೆ ಹೆಳೋದು… ಮಾಡುವುದನ್ನು ಮಾಡಿ ಮುಗಿಸಿ ಕೊಡುವುದನ್ನು ಕೊಟ್ಟು ಮುಗಿಸಿ ಮನಸಿನ ಆಸೆಗಳನ್ನು ಬಚ್ಚಿಟ್ಟು ಕೊರಗದಿರಿ ನಿರಾಳ ಮನಸ್ಸಿನಿಂದ ಬದುಕಿರಿ.!! ಗೆಳೆಯ…… ನೀನು ಒಂದು ಕೊಹಿನೂರ್ ವಜ್ರ!!! ಮರೆಯೋಣ ಕಳೆಯೋಣ ಹಳೆಯ ಮಿತ್ರರೊಂದಿಗೆ ಬದುಕಿನ ಕೊನೆಯ ಕ್ಷಣಗಳ ಸದಾ ನಗು ನಗುತ್ತ ಕಳೆಯೋಣ. [end]

Recommended

jump up!
jump up!

disney, Pop

Exosphere
Exosphere

edm, chiptune, dubstep, future bass, melodic, heavenly, 128 BPM

An Endless Road
An Endless Road

emo rap, bass, trap,male voice

Shadowed Steps
Shadowed Steps

emo acoustic downbeat

From Shadows to Stars
From Shadows to Stars

classical cello emotional

EGo
EGo

Pop rock, hip hop, guitar, mellow, female voice, male voice, melodi

Missing You
Missing You

melodic pop acoustic

ACOUSTIC FOLK MELODIC SERENE
ACOUSTIC FOLK MELODIC SERENE

acoustic folk melodic serene

Meta Song
Meta Song

synth-pop,electronic,deep house,bedroom pop,indie,8bit,catchy,hooky,sweet sassy female vocal

Journey in Motion
Journey in Motion

pop rhythmic

I'll Be Fine Inst
I'll Be Fine Inst

Orchestral, Hardstyle

Pima
Pima

Rap

Smiling
Smiling

edm, electronic, progressive, upbeat, electro, beat, emotional

Neon Dreamscape
Neon Dreamscape

instrumental,1980s,electronic,progressive electronic,ambient,new age,synthpop,space ambient,hypnotic,progressive,futuristic,mysterious,instrumental,surreal,ethereal